ಆಂಟಿಫಾನ್
	(ಕ್ರಿ.ಪೂ. 480-411). ಅಟಿಕದ ವಾಗ್ಮಿಗಳಲ್ಲಿ ಮೊದಲನೆಯವ. ಕ್ರಿ.ಪೂ. 411ರ ಅಲ್ಪತಂತ್ರ ಕ್ರಾಂತಿಯಲ್ಲಿ ಭಾಗವಹಿಸಿದನೆಂದು ಮರಣದಂಡನೆಗೆ ಗುರಿಯಾದ. ಈತ ಹಿಂದಿನ ಕಟುಸಂಯಮದ ಶೈಲಿಯ ವಾಗ್ಮಿಗಳ ಪಂಥಕ್ಕೆ ಸೇರಿದವ. ವ್ಯವಹಾರಗಳಲ್ಲಿ ಕಕ್ಷಿಗಾರರೇ ತಮ್ಮ ಪಕ್ಷವನ್ನು ಪ್ರತಿಪಾದಿಸಲು ಭಾಷಣಗಳನ್ನು ಸಿದ್ಧಗೊಳಿಸುತ್ತಿದ್ದ. ಭಾಷಣ ಕಲೆಯ ಶಿಕ್ಷಕನೂ ಆಗಿದ್ದ. ಥ್ಯೂಸಿಡಿಡೀಸ್ಹ್ ಇವನ ಶಿಷ್ಯ ಎಂದು ಹೇಳುತ್ತಾರೆ. ಕೊಲೆಗಳ ಮೊಕದ್ದಮೆಗಳಿಗೆ ಸಂಬಂಧಿಸಿದ ವಾದಗಳಿಗೆ ವಿಶೇಷವಾಗಿ ಪ್ರಸಿದ್ಧನಾಗಿದ್ದ.										
(ಕೆ.ಎ.; ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ